Advanced International Journal for Research

E-ISSN: 3048-7641   •   Impact Factor: 9.11

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 7, Issue 5 (September-October 2026) Submit your research before last 3 days of October to publish your research paper in the issue of September-October.

ಮೂರ್ತಿರಾಯರ ಲಲಿತ ಪ್ರಬಂಧಗಳಲ್ಲಿ ಮಾನವೀಯತೆ

Author(s) Prof. Mujahid Pasha M G
Country India
Abstract ಕನ್ನಡ ಲಲಿತ ಪ್ರಬಂಧ ಪ್ರಕಾರವನ್ನು ಪ್ರೌಢ ಸ್ವರೂಪಕ್ಕೆ ಒಯ್ದ ಪ್ರಮುಖ ಲೇಖಕರಲ್ಲಿ ಎ.ಎನ್. ಮೂರ್ತಿರಾವ್ (೧೯೦೦–೨೦೦೩) ಅಗ್ರಗಣ್ಯರು. 'ಹಗಲುಗನಸುಗಳು', 'ಅಲೆಯುವ ಮನ', 'ಮಿನುಗು ಮಿಂಚು', ಮೊದಲಾದ ಸಂಕಲನಗಳಲ್ಲಿನ ಅವರ ಪ್ರಬಂಧಗಳು ಬರಿಯ ಹಾಸ್ಯ ಅಥವಾ ಲಘು ಮನರಂಜನೆಗೆ ಸೀಮಿತವಾಗದೆ, ಮನುಷ್ಯ ಸಂಬಂಧಗಳ ಸೂಕ್ಷ್ಮತೆಯನ್ನೂ, ಸಾಮಾನ್ಯ ಬದುಕಿನ ಘನತೆಯನ್ನೂ ದಾಖಲಿಸುವ ಮಾನವಕೇಂದ್ರಿತ ಬರವಣಿಗೆಯಾಗಿ ರೂಪುಗೊಂಡಿವೆ. ಪ್ರಸ್ತುತ ಲೇಖನವು ಮೂರ್ತಿರಾಯರ ಲಲಿತ ಪ್ರಬಂಧಗಳಲ್ಲಿ ಅಭಿವ್ಯಕ್ತಗೊಂಡಿರುವ ಮಾನವೀಯತೆಯ ವಿವಿಧ ಆಯಾಮಗಳನ್ನು — ಆತ್ಮಪ್ರಾಮಾಣಿಕತೆ, ಸಹಾನುಭೂತಿ, ನೋಯಿಸದ ಹಾಸ್ಯ, ಕೌಟುಂಬಿಕ ಸಂಬಂಧಗಳ ಚಿತ್ರಣ, ಸಾಮಾಜಿಕ ಅಸಮಾನತೆಯ ಬಗೆಗಿನ ವಿಮರ್ಶಾತ್ಮಕ ನಿಲುವು, ಜೀವಕಾರುಣ್ಯ ಮತ್ತು ಸಾಂಸ್ಕೃತಿಕ ಸಹಿಷ್ಣುತೆ — ಗುರುತಿಸಿ ವಿಶ್ಲೇಷಿಸುತ್ತದೆ. ಮೂರ್ತಿರಾಯರ ಮಾನವೀಯತೆ ಉಪದೇಶಾತ್ಮಕವಾಗಿರದೆ ಶೈಲಿಯ ಒಳಗಿನಿಂದಲೇ ಹೊಮ್ಮುವ ಗುಣವಾಗಿದೆ ಎಂಬುದು ಈ ಅಧ್ಯಯನದ ಪ್ರಮುಖ ನಿಲುವು.
Keywords ಪ್ರಮುಖ ಪದಗಳು(Keywords) : ಲಲಿತ ಪ್ರಬಂಧ, ಎ.ಎನ್. ಮೂರ್ತಿರಾವ್, ಮಾನವೀಯತೆ, ನವೋದಯ ಗದ್ಯ, ವೈಚಾರಿಕತೆ, ಜೀವಕಾರುಣ್ಯ, ಕನ್ನಡ ಪ್ರಬಂಧ ಸಾಹಿತ್ಯ.
Published In Volume 7, Issue 4, July-August 2026
Published On 2026-08-12
DOI https://doi.org/10.63363/aijfr.2026.v07i04.7190

Share this