Advanced International Journal for Research

E-ISSN: 3048-7641   •   Impact Factor: 9.11

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 7, Issue 6 (November-December 2026) Submit your research before last 3 days of December to publish your research paper in the issue of November-December.

ಬಾನು ಮುಷ್ತಾಕರ ‘ಸಫೀರಾ’ ಕತೆಯಲ್ಲಿ ಸ್ತಿ ಪಾತ್ರಗಳು

Author(s) ಡಾ.ಮುಮ್ತಾಜ್ ಬೇಗಂ. ಗಂಗಾವತಿ
Country India
Abstract ಬಾನು ಮುಷ್ತಾಕ್ ಕನ್ನಡ ಸಾಹಿತ್ಯದ ಮಹತ್ವದ ಲೇಖಕಿ. ಪತ್ರಕರ್ತೆ, ವಕೀಲೆ, ಸಾಮಾಜಿಕ ಕಾರ್ಯಕತೆಯಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ತೊಡಗಿಸಿಕೊಂಡವರು. ಕತೆ, ಕಾದಂಬರಿ, ಪ್ರಬಂಧ, ಕವನ ಸಂಕಲನ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಇವರ ಕೃತಿಗಳು ಉರ್ದು, ಹಿಂದಿ ಮಲಯಾಳಂ, ತಮಿಳು, ಇಂಗ್ಲೀಷ ಭಾಷೆಗಳಿಗೆ ಅನುವಾದಗೊಂಡಿವೆ. ಸಣ್ಣ ಕಥಾ ಸಂಕಲನಕ್ಕಾಗಿ ಪ್ರತಿಷ್ಠಿತ ಅಂತರರಾಷ್ಟಿçÃಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡದ ಲೇಖಕಿ ಎನ್ನುವುದು ಕನ್ನಡದ ಸಂದರ್ಭದಲ್ಲಿ ಹೆಮ್ಮೆಯ ಸಂಗತಿಯಾಗಿದೆ.
ಬಾನು ಮುಷ್ತಾಕ್ ಅವರು ಹೇಳುವಂತೆ “ಸೃಜನಶೀಲ ಅಭಿವ್ಯಕ್ತಿಯ ತುಡಿತಗಳನ್ನು ಹೃದಯಕ್ಕೆ ಸಮೀಪದ ಸಂವೇದನೆಗಳಾಗಿ ಸಮೀಕರಿಸಬಹುದು. ಹೃದಯ ಮತ್ತು ಬುದ್ದಿಯ ಸಂಘರ್ಷದಲ್ಲಿ ಯಾವುದು ಪ್ರಧಾನವಾಗಿ ನಿರ್ಧರಿಸುವ ಶಕ್ತಿಯಾಗುತ್ತದೆ ಎಂಬುದರ ಮೇಲೆ ವ್ಯಕ್ತಿಯ ಬದುಕು ಮತ್ತು ಧೋರಣೆಗಳು ನಿರ್ದೇಶಿಸಲ್ಪಡುತ್ತದೆ. ನಮ್ಮ ಕುಟುಂಬ, ಪರಿಸರ, ನಂಬಿಕೆ, ಆಚಾರ-ವಿಚಾರ ಮತ್ತು ನಮ್ಮ ಸುರಕ್ಷಿತ ವಲಯ ಎಲ್ಲವೂ ನಮಗೆ ಅಪ್ಯಾಯಮಾನವಗಿರುತ್ತದೆ. ಆದರೆ ನಮ್ಮ ಸುತ್ತಮುತ್ತಲಿನ ಸಹ ಜೀವಿಗಳ ಬಾಳ್ವೆ ನಮ್ಮನ್ನು ಬಾಧಿಸದಿದ್ದಲ್ಲಿ, ತಟ್ದಿದದಲ್ಲಿ ನಮ್ಮ ಅಂತರAಗದ ಸೆಲೆ ಬತ್ತಿದಂತೆಯೇ ಸರಿ” ಎನ್ನುತ್ತಾರೆ. ಬಾನು ಮುಷ್ತಾಕ್ ಅವರು ಒಬ್ಬ ಸಂವೇದಾನಾಶೀಲ ವ್ಯಕ್ತಿ. ನ್ಯಾಯವಾದಿಯಾಗಿ ತಮ್ಮ ಸುತ್ತಮುತ್ತಲಿನ ಅನೇಕರ ಬದುಕನ್ನು ತುಂಬಾ ಹತ್ತಿರದಿಂದ ನೋಡಿದವರು. ಜನರ ನೋವುಗಳನ್ನು ನಲಿವುಗಳನ್ನು ಕಂಡವರು. ಹೀಗೆ ಕಂಡುAಡ ಅನುಭವನ್ನು ಅಕ್ಷರಗಳ ಮೂಲಕ ಅಭಿವ್ಯಕ್ತಿದ ರೂಪಗಳೇ ಈ ಕತೆಗಳು ಎಂದರೆ ಅತಿಯೋಶಕ್ತಿಯಾಗಲಾರದು.
Published In Volume 7, Issue 3, May-June 2026
Published On 2026-06-18

Share this