Advanced International Journal for Research

E-ISSN: 3048-7641   •   Impact Factor: 9.11

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 7, Issue 6 (November-December 2026) Submit your research before last 3 days of December to publish your research paper in the issue of November-December.

ಬೀಸುಕಲ್ಲಿನಪದ ಮತ್ತು ತವರುಮನೆ

Author(s) ಡಾ.ಮುಮ್ತಾಜ್ ಬೇಗಂ. ಗಂಗಾವತಿ
Country India
Abstract ಆಧುನಿಕತೆಯ ಭರಾಟೆಯ ಸೊಂಕಿಲ್ಲದ ಕಾಲದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳು ದಿನನಿತ್ಯದ ಕಾಯಕವನ್ನು ಬೀಸುವ ಕಾರ್ಯದಿಂದ ಆರಂಭಿಸುತ್ತಿದ್ದರು. ಬದುಕಿನ ಬವಣೆ ಕಷ್ಟ ಸುಖಗಳ ಭಾರವನ್ನು ಇಳಿಸಿಕೊಳ್ಳಲು ಒಂದು ಮಾಧ್ಯಮವಾಗಿತ್ತು. ತನ್ನೊಳಗಿನ ನೋವನ್ನು ಹೆಣ್ಣು ಯಾರ ಹತ್ತಿರವು ಹೇಳಿಕೊಳ್ಳಲಾರಳು. ಅಸಹಾಯಕ ಸ್ಥಿತಿಯಲ್ಲಿ ಗಟ್ಟಿಯಾದ ಕಲ್ಲನ್ನು ತಿರುಗಿಸುವುದರೊಂದಿಗೆ ಹಾಡನ್ನು ನೀವೆದಿಸಿಕೊಳ್ಳುವಂತೆ ತೋರುತ್ತದೆ.
ಹಿಂದಿನ ಕಾಲದಲ್ಲಿ ಕೋಲಾಟ ಬೇರೆ ಪ್ರಕಾರದ ಹಾಡುಗಳನ್ನು ಹಾಡಲು ಬರದ ಗಂಡು ಮಕ್ಕಳು ಸಿಗುತ್ತಿದ್ದರು. ಆದರೆ ಬೀಸುವ, ಕುಟ್ಟುವ ಹಾಡು ಹಾಡದ ಹೆಣ್ಣು ಮಕ್ಕಳಿರದ ಹಳ್ಳಿಯೇ ಸಿಕ್ಕುತ್ತಿರಲಿಲ್ಲ. ಪ್ರತಿಯೊಂದು ಮನೆಯಲ್ಲೂ ಬೀಸುವ ಕಲ್ಲು ಇದ್ದೆ ಇರುತ್ತಿತ್ತು. ಏಕೆಂದರೆ ಆಧುನಿಕ ಜಾಗತಿಕರಣಕ್ಕೆ ಇನ್ನೂ ಅಂದಿನ ಹಳ್ಳಿಗಳು ಒಳಗಾಗದೇ ಇದ್ದ ಸಂದರ್ಭದಲ್ಲಿ ಬೀಸುವ ಕಲ್ಲುಗಳೇ ಜೋಳ, ರಾಗಿ ಮುಂತಾದ ಧಾನ್ಯಗಳನ್ನು ಹಿಟ್ಟು ಮಾಡುವ ಉಪಕರಣವಾಗಿತ್ತು. ಆಧುನಿಕತೆಯಲ್ಲಿರುವ ಮಿಕ್ಸರ್, ಗ್ರಾö್ಯಂಡರ್ ಇರಲಿಲ್ಲ. ಆದರೂ ಇಂದಿಗೂ ಮನೆಗಳಲ್ಲಿ ಬೀಸುವ ಕಲ್ಲು ಪಳೆಯುಳಿಕೆಯ ರೀತಿಯಲ್ಲಿ ನಮ್ಮೊಂದಿಗೆ ಬದುಕುತ್ತಿರುವುದನ್ನು ಕಾಣುತ್ತೆವೆ. ಧಾನ್ಯಗಳನ್ನು ಬೀಸುವಾಗಲೆಲ್ಲಾ ಬೀಸುವ ಪದಗಳು ಕೇಳಿ ಬರುತ್ತಿದ್ದವು.
Published In Volume 7, Issue 2, March-April 2026
Published On 2026-04-12

Share this